logo

Kshatriya Komarpanth Samaj

ಅಖಿಲ ಕೊಮಾರಪಂತ ಸಮಾಜ REG No. 332/83-84

logo  logo  logo  logoNEWS:

 
Akhila Komarpanth Samaj (R) REG No. 332/83-84
ಕೋಮಾರಪಂಥ ಸಮಾಜ ಕಡವಾಡ

ಕೋಮಾರಪಂಥ ಸಮಾಜ ಕಡವಾಡದವರು ಸುಮಾರು 47 ವರ್ಷದಿಂದ ನಿಂತು ಹೋದ ಸುಗ್ಗಿ ಪರಂಪರೆಯನ್ನು ಮತ್ತೆ ಪ್ರಾರಂಭಿಸಿದ ಅಪರೂಪದ ಘಟನೆ ಇಂದು ನಡೆದಿದೆ. ಶ್ರೀ ಮಾರುತಿ ನಾಯ್ಕ ರವರ ಮುಂದಾಳತ್ವದಲ್ಲಿ ನಡೆದ ಈ ಕಾರ್ಯಕ್ರಮವು ಸಮಾಜದ ಘಟಕಾಧಕ್ಷರಾದ ಶ್ರೀ ಮೋಹನ ನಾಯ್ಕ, ಶ್ರೀ ನಂದಾ ಕಳಸ ಶ್ರೀ ದಾಮೋದರ ನಾಯ್ಕ, ಶ್ರೀ ಸೋಯರು ನಾಯ್ಕ ಹಾಗೂ ಊರಿನ ಬುದವಂತರಾದ ಶ್ರೀ ದುಗಾ ನಾಯ್ಕ ಇವರ ಉಪಸ್ಥಿತಿಯಲ್ಲಿ ಹೊರಟ ಸುಗ್ಗಿ ಕೋಟೇಶ್ವರ ದೇವಸ್ಥಾನದಿಂದ ಶುರುವಾಗಿ ಮಹಾದೇವದೇವಸ್ಥಾನ, ಬುದವಂತರ ಮನೆ, ಹಾಗೂ ಇನ್ನಿತರೆ ಮನೆಯಲ್ಲಿ ಪ್ರಾರಂಭಿಸಿದರು. ಈ ಸಂಧರ್ಭದಲ್ಲಿ ಅ.ಕೋ.ಸ. ಅಧ್ಯಕ್ಷ ರಾದ ಶ್ರೀ ಆರ್.ಎಸ್. ನಾಯ್ಕ. ಹಾಗೂ ಶ್ರೀ ಮಾಹಾದೇವ ನಾಯ್ಕ ಹಾಗೂ ಇನ್ನಿತರರು ಉಪಸ್ಥಿತಿರಿದ್ದರು. ಸುಗ್ಗಿ ಹಬ್ಬವು ರವಿವಾರ ಕೋಟೇಶ್ವರ ದೇವಸ್ಥಾನದಲ್ಲಿ ಸಂಪನ್ನಗೊಳ್ಳಲಿದೆ.
See More...

ಗೋಕರ್ಣ ಹಾಗೂ ಕ್ಷತ್ರಿಯ ಕೋಮಾರಪಂಥ ಸಮಾಜ

.ಹೌದು‌ ಹೀಗೊಂದು ಕೂತುಹಲಕಾರಿ ಶೀರ್ಷಿಕೆ ನೋಡಿ ನಿಮಗೆಷ್ಟು ಆಶ್ಚರ್ಯವಾಯಿತೋ ಸಮಾಜದ‌‌ ಕೆಲ ಹಿರಿಯವರು ಹೇಳಿದಾಗ ಅಷ್ಟೇ ಕುತೂಹಲ ನನಗೂ ಆಗಿತ್ತು.‌ ಅಸ್ಪಷ್ಟವಾಗಿ ಹೇಳಿದರು ಉತ್ಖನನಕ್ಕೆ ಸಾಕಾಗುವಷ್ಟು ವಿಚಾರ ಅವರು ತಿಳಿಸಿದ್ದರು. ಆದರೂ ಅದಕ್ಕೆ ಸಂಬಂಧ ಪಟ್ಟ ದಾಖಲೆ ಅಥವಾ ನಮ್ಮ ಜನರ ಸಂಪರ್ಕ ಸಾದಿಸಲು ಕಷ್ಟವಾಗಿತ್ತು. ಇತ್ತಿಚಿಗೆ ಅಂದರೆ ಶೃಂಗೇರಿ ಯಲ್ಲಿ ನಮ್ಮ ಸಮಾಜದ ವರ್ಷದ ಕಾರ್ಯಕ್ರಮ 'ಭರತ ಹುಣ್ಣಿಮೆ' ವಿಚಾರವಾಗಿ ಮಾತಾಡುವಾಗ ಅಕಸ್ಮಾತ್ ಆಗಿ ಕೋಡಿಭಾಗದ ಶ್ರೀ ಚಂದ್ರಕಾಂತ ರವರು ಈ ವಿಚಾರವಾಗಿ ಸಂಪರ್ಕ ವ್ಯಕ್ತಿಯ ಬಗ್ಗೆ ಒಂದು ಸುಳಿವು ಕೊಟ್ಟರು.
Read More...

ಜಾಲತಾಣ ಲೋಕಾರ್ಪಣ

ದಕ್ಷೀಣಾಮ್ನಾಯ ಪೀಠ ಶೃಂಗೇರಿ ಯ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಾಹಾಸ್ವಾಮಿ ಹಾಗೂ ಶ್ರೀ ಶ್ರೀ ವಿಧುಶೇಖರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ. ಅಖಿಲ ಕೊಮಾರಪಂತ ಸಮಾಜದ ಅಧ್ಯಕ್ಷರು ಹಾಗೂ ಸದಸ್ಯರು” ದಿನಾಂಕ 21 ರಂದು ದಕ್ಷೀಣಾಮ್ನಾಯ ಪೀಠ ಶೃಂಗೇರಿ ಯ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಾಹಾಸ್ವಾಮಿ ಹಾಗೂ ಶ್ರೀ ಶ್ರೀ ವಿಧುಶೇಖರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಸಮಾಜದ‌ ವತಿಯಿಂದ ಸಮಾಜದವರೇ ನಿರ್ಮಿಸಿದ ಜಾಲತಾಣ www.kshatriyakomarpanth.com ಅನ್ನು ಗುರುಗಳ ಅಪ್ಪಣೆಯ ಮೇರೆಗೆ ಲೋಕಾರ್ಪಣ ಮಾಡಲಾಯಿತು.
Read More...
WEBSITE VISITORS HITS