logo

Kshatriya Komarpanth Samaj

ಅಖಿಲ ಕೊಮಾರಪಂತ ಸಮಾಜ REG No. 332/83-84

logo  logo  logoNEWS:

AchievementsSharad M Naik

Asst. Commissioner of Police Division Mumbai was awarded with meritorious service on Republic Day 2019. Kshatriya Komarpanth Samaj congrats for his success
*ಸಾಮಾಜಿಕ ಕಾರ್ಯಕರ್ತ ಮಾಧವ ನಾಯಕರಿಗೆ ರಾಷ್ಟ್ರ ಭೂಷಣ ಪ್ರಶಸ್ತಿ ಪ್ರಧಾನ*

ಬೆಳಗಾವಿಯ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಟಾನ ವತಿಯಿಂದ ನೀಡುವ ರಾಷ್ಟ್ರಭೂಷಣ ಪ್ರಶಸ್ತಿಯನ್ನ ಕಾರವಾರದ ಸಾಮಾಜಿಕ ಕಾರ್ಯಕರ್ತ ಮಾಧವ ನಾಯಕರಿಗೆ ಪ್ರಧಾನ ಮಾಡಲಾಯಿತು. ಬೆಳಗಾವಿಯ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಅರಳಿ ನಾಗರಾಜ ಮಾಧವ ನಾಯಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು‌. ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸಿರಿಗನ್ನಡ ಪ್ರತಿಷ್ಟಾನ ರಾಜ್ಯೋತ್ಸವ ಕಾರ್ಯಕ್ರಮ ಹಿನ್ನಲೆಯಲ್ಲಿ ರಾಷ್ಟ್ರ ಭೂಷಣ ಪ್ರಶಸ್ತಿ ನೀಡುತ್ತಾ ಬಂದಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಹಕವಾರು ವರ್ಷಗಳಿಂದ ಸಮಾಜ ಸೇವೆ ಮಾಡುತ್ತಿರುವ ಮಾಧವ ನಾಯಕರನ್ನ ಈ ಬಾರಿ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾಧವ ನಾಯಕರು ಜಿಲ್ಲೆಯ ಜನತೆಗೆ ಚಿರಪರಿಚಿತ ವ್ಯಕ್ತಿಯಾಗಿದ್ದು ಬಡವ್, ದೀನ ದಲಿತರ ಪರ ಕೆಲಸ ಮಾಡುವುದರ ಜೊತೆಗೆ ಎಲ್ಲಿ ಅನ್ಯಾಯವಾದರು ಧ್ವನಿ ಎತ್ತಿ ಹೋರಾಟ ಮಾಡುವ ಗುಣ ಹೊಂದಿದ್ದಾರೆ‌. ಅಪಘಾತವಾದಾಗ ತಮ್ಮ ವಾಹನದಲ್ಲಿಯೇ ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಿದ ಸಾಕಷ್ಟು ಪ್ರಕರಣಗಳಿದ್ದು ಮಾಧವ ನಾಯಕರ ಸಾಮಾಜಿಕ ಸೇವೆಗೆ ಸಿಕ್ಕ ಗೌರವವಾಗಿದೆ. ಪ್ರಶಸ್ತಿ ಪ್ರಧಾನ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಸಾಕಷ್ಟು ಮಾಧವ ನಾಯಕರ ಅಭಿಮಾನಿಗಳು ಕಾರ್ಯಕ್ರಮಕ್ಕೆ ತೆರಳಿದ್ದರು. ಇನ್ನು ಕೋಮಾರಪಂಥ ಸಮುದಾಯದ ವತಿಯಿಂದ ಪ್ರಶಸ್ತಿ ಪ್ರಧಾನ ಮಾಡಿದ ಸಂದರ್ಭದಲ್ಲಿ ಮಾಧವ ನಾಯಕರಿಗೆ ಸನ್ಮಾನ ಸಹ ಮಾಡಲಾಯಿತು.
ರಕ್ಷಿತಾ ರಾಜಶೇಖರ್ ನಾಯ್ಕ್

ಅಮೇರಿಕಾದ ನಾಸಾ ಬಾಹ್ಯಾಕಾಶ ಸಂಸ್ಥೆಯ ಅಧ್ಯಯನ ಮುಗಿಸಿ ಬಂದ ಅಂಕೋಲಾ ತಾಲೂಕಿನ ಪ್ರಥಮ ಪುತ್ರಿ..ಅಂಕೋಲಾ ತಾಲೂಕಿನ ಲಕ್ಷ್ಮೇಶ್ವರ ಗ್ರಾಮದ ರಾಜಶೇಖರ್ ಗಣಪು ನಾಯ್ಕ್ (ದಿ. ಗಣಪು ದನ್ನು ನಾಯ್ಕ್ ಇವರ ಮೊಮ್ಮಗಳು) ಇವರ ಮಗಳಾದ ರಕ್ಷಿತಾ ರಾಜಶೇಖರ್ ನಾಯ್ಕ್ ಇವಳು ದಿನಾಂಕ 9 ಮೇ 2017 ರಿಂದ 21 ಮೇ 2017 ರ ವರೆಗೆ ಈಕೆ ಅಮೇರಿಕಾದ ಪ್ರತಿಷ್ಠಿತ ನಾಸಾ ಬಾಹ್ಯಾಕಾಶ ಸಂಸ್ಥೆಯಲ್ಲಿ 10 ದಿನಗಳ ಕಾಲ ನಡೆದಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನ ಮುಗಿಸಿ ರಾಜ್ಯಕ್ಕೆ ಹಾಗೂ ತಾಲೂಕಿಗೆ ಹೆಮ್ಮೆ ತಂದಿರುತ್ತಾಳೆ ಇವಳ ಈ ಸಾಧನೆಗೆ ನಮ್ಮ ಅಖಿಲ ಕ್ಷತ್ರೀಯ ಕೋಮಾರಪಂತ ಸಮಾಜದಿಂದ ಧನ್ಯವಾದಗಳು.WEBSITE VISITORS HITS