logo

Kshatriya Komarpanth Samaj

ಅಖಿಲ ಕೊಮಾರಪಂತ ಸಮಾಜ REG No. 332/83-84

logo  logo  logoNEWS:

 

Click here  Kannada Version   English Version

ಗೋಕರ್ಣ ಹಾಗೂ ಕ್ಷತ್ರಿಯ ಕೋಮಾರಪಂಥ ಸಮಾಜ.

ಹೌದು‌ ಹೀಗೊಂದು ಕೂತುಹಲಕಾರಿ ಶೀರ್ಷಿಕೆ ನೋಡಿ ನಿಮಗೆಷ್ಟು ಆಶ್ಚರ್ಯವಾಯಿತೋ ಸಮಾಜದ‌‌ ಕೆಲ ಹಿರಿಯವರು ಹೇಳಿದಾಗ ಅಷ್ಟೇ ಕುತೂಹಲ ನನಗೂ ಆಗಿತ್ತು.‌ ಅಸ್ಪಷ್ಟವಾಗಿ ಹೇಳಿದರು ಉತ್ಖನನಕ್ಕೆ ಸಾಕಾಗುವಷ್ಟು ವಿಚಾರ ಅವರು ತಿಳಿಸಿದ್ದರು. ಆದರೂ ಅದಕ್ಕೆ ಸಂಬಂಧ ಪಟ್ಟ ದಾಖಲೆ ಅಥವಾ ನಮ್ಮ ಜನರ ಸಂಪರ್ಕ ಸಾದಿಸಲು ಕಷ್ಟವಾಗಿತ್ತು. ಇತ್ತಿಚಿಗೆ ಅಂದರೆ ಶೃಂಗೇರಿ ಯಲ್ಲಿ ನಮ್ಮ ಸಮಾಜದ ವರ್ಷದ ಕಾರ್ಯಕ್ರಮ 'ಭರತ ಹುಣ್ಣಿಮೆ' ವಿಚಾರವಾಗಿ ಮಾತಾಡುವಾಗ ಅಕಸ್ಮಾತ್ ಆಗಿ ಕೋಡಿಭಾಗದ ಶ್ರೀ ಚಂದ್ರಕಾಂತ ರವರು ಈ ವಿಚಾರವಾಗಿ ಸಂಪರ್ಕ ವ್ಯಕ್ತಿಯ ಬಗ್ಗೆ ಒಂದು ಸುಳಿವು ಕೊಟ್ಟರು. ತಡಮಾಡದೇ ಆ‌ ವ್ಯಕ್ತಿಯ ಸಂಪರ್ಕ ಸಾಧಿಸಿ ಶ್ರೀ ಚಂದ್ರಕಾಂತ ಹಾಗೂ ಶ್ರೀ ಯೋಗೇಶ್ ರವರ ಜೊತೆಗೂಡಿ ಅವರನ್ನು ಹುಡುಕಿ ದಿ19. ಫೇ. ಯಂದು ಅವರ ಮನೆಗೆ ತಲುಪಿ ವಿಚಾರವನ್ನು ಕೆದಕಿದಾಗ ಸಿಕ್ಕ ಉತ್ತರ ಕೇಳಿ‌ ಆಶ್ಚರ್ಯ ಹಾಗೂ ಹೆಮ್ಮೆ ಪಟ್ಟಿದೇವು.

ಸೂಮಾರು‌ ವರ್ಷದ‌ ಹಿಂದೆ ನಮ್ಮ ಸಮಾಜದ ವತಿಯಿಂದ ಗೋಕರ್ಣದಲ್ಲಿ ರಥೋತ್ಸವ ಮಾಡಿ ಬರುವ ಪರಂಪರೆ ಹಾಗೂ ಶ್ರೀ ಕ್ಷೇತ್ರಕ್ಕೆ ನಮ್ಮ ಸಮಾಜದಿಂದ ಒಂದು ಬೆಳ್ಳಿಯ ಕೊಡ ನೀಡಿದ್ದು‌ ಇರುತ್ತದೆ. ಪ್ರತಿ ವರ್ಷ ನಮಗೆ ಒಂದು ಪತ್ರ ಬಂದ ನಂತರ ನಾವುಗಳು ಅಲ್ಲಿ ಹೋಗಿ ವಿಧಿವತ್ತಾಗಿ ಅದೇ ಕೊಡದಿಂದ ಶ್ರೀ ಮಹಾಬಲ್ಲೇಶ್ವರನಿಗೆ ಅಭಿಷೇಕ ಮಾಡಿ ಇತರೆ ಕಾರ್ಯವನ್ನು ಮಾಡಿ ಬಂದಿರುತ್ತೇವೆ. ಆದರೆ, ಕಾರಣಾಂತರದಿಂದ ಸರಿ ಸುಮಾರು 10 ವರ್ಷದಿಂದ ಈ ಕಾರ್ಯ ನಮ್ಮ ಸಮಾಜದ ವತಿಯಿಂದ ನಿಂತು ಹೋಗಿದ್ದು, ಪತ್ರ ಬರುವುದು ನಿಂತಿದ್ದೇ ಅದಕ್ಕೆ ಕಾರಣವೆಂದು ತಿಳಿಸಿದರು. ಹಾಗೂ ಅದಕ್ಕೆ ಸಂಭಂದ ಪಟ್ಟ ಪತ್ರವೊಂದು ಅಂಕೋಲೆಯ ಕೇಣಿಯಲ್ಲಿ ಇತ್ತು ಎಂದು ಹೇಳಿದರು. ತಡಮಾಡದೇ ಆ ವ್ಯಕ್ತಿಯನ್ನು ಅದೇ ದಿನ ಹುಡುಕಿದ ಶ್ರೀ ಚಂದ್ರಕಾಂತ ರವರು ಶ್ರೀ ಯೋಗೇಶ ರವರ ಮಾರ್ಗದರ್ಶನದಲ್ಲಿ ಮಾರನೇ ದಿನ ಅಂದರೇ ಫೇ: 20 ರಂಬು ಸುಮಾರು‌7:30 ರ ಬೆಳ್ಳಿಗ್ಗೆ ಅವರ ಮನೆ ತಲುಪಿದೇವು. ಅಷ್ಟು ಹೊತ್ತಿಗೆ ಅವರು ಆ ಕಾಗದ ಹುಡುಕುತ್ತಾ ಇದ್ದರು. ಅದೃಷ್ಟವಶಾತ್ ಸಿಕ್ಕಿಯೂ ಬಿಟ್ಟಿತು. ಆಗ ಆ ಪತ್ರದಲ್ಲಿ ಉಲ್ಲೇಖಿಸಿದ ಮಾತು ಹಾಗೂ ಕೋಡಿಬಾಗದವರು ಹೇಳಿದ ಮಾತು ಸುಮಾರು ತಾಳೆ ಆಗಲು ತೊಡಗಿತ್ತು. ಒಂದು ಕಡೆಯಿಂದ ಶ್ರೀ ದೇವರ ರಥೋತ್ಸವ ಸಮಿಪಿಸುತ್ತಿತ್ತು ಇನ್ನೊಂದು ಕಡೆ ಶ್ರೀ ಗೋಕರ್ಣದ ಈಗಿನ ಆಡಳಿತಾಧಿಕಾರಿಯವರಾದ ಶ್ರೀ ಶ್ರೀ ರಾಘವೇಶ್ವರ ಭಾರತಿಮಹಾಸ್ವಾಮಿಗಳು ಹೊನ್ನಾವರಕ್ಕೆ ಒಂದಿದ್ದರು. ತಡಮಾಡದೆ ಹೊರಟ ನಾನು ಸಿದಾ ತಲುಪಿದ್ದು ಶ್ರೀ ಗುರುಗಳ ಹತ್ತಿರ. ಪತ್ರವನ್ನು ಅವರ ಚರಣದಲ್ಲಿ ಇಟ್ಟು ನಮಸ್ಕರಿಸಿ ವಿಚಾರವನ್ನು ತಿಳಿಸಿದೆ. ಶ್ರೀಗಳಿಗೂ ಆಶ್ಚರ್ಯ ಹಾಗೂ ಒಂದು ಕಡೆಯಿಂದ ಬೇಸರ ಪಟ್ಟರು, ಕಾರಣ ಮುಂಚೆ ಆಡಳಿತ ನಡಿಸುವವರು ಈ ವಿಚಾರದ ಬಗ್ಗೆ ಒಂದಕ್ಷರವು ಹೇಳಿರಲಿಲ್ಲಾ ಎಂದು‌. ಆಗ ಶ್ರೀಗಳು ನನ್ನಲ್ಲಿ ಹೇಳಿದ ವಿಚಾರ "ಆಗಿದ್ದು ಆಗೋಯ್ತು ಇನ್ನು ಸರಿ ಮಾಡೋಣ, ಶ್ರೀ ಗೋಕರ್ಣದಲ್ಲಿ ನಿಮ್ಮ ಸಮಾಜದಿಂದ ನಡೆಯುವ ಕಾರ್ಯಕ್ರಮದ ಬಗ್ಗೆ ಪತ್ರದ ಉಲ್ಲೇಖ ಓದಿ ಮುಂದೆ ಎನೂ ಮಾಡುವುದು ಎಂದು ತಿಳಿಸುತ್ತೇವೆ" ಎಂದರು. ಧನ್ಯವಾಯಿತು ನಮ್ಮ ಕೆಲಸ ಅನ್ನಿಸಿತು. ಅದೇ ದಿವಸ ಶ್ರೀ ಗೋಕರ್ಣ ಮಠದ ಆಡಳಿತ ಮಂಡಳಿಯ ಶ್ರೀಯುತ ಜಿ.ಕೆ. ಹೆಗಡೆಯವರು ದೂರವಾಣಿ ಮೂಲಕ ವಿಚಾರವನ್ಮು ಪತ್ರದಲ್ಲಿ ಉಲ್ಲಖಿಸಿದ ವಿಚಾರವನ್ನು ಅತ್ಯಂತ ಸ್ವಷ್ಟವಾಗಿ ಹೇಳಿದರು.

ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ನಮ್ಮ ಸಮಾಜದ ವಾರ್ಷಿಕ ಪೂಜೆ "ಚೈತ್ರ ಬಹುಳ ಅಮಾವಾಸ್ಯೆ "ಯ ದಿನ ಇರುತ್ತದೆ. ಆ ದಿನ ಸಾಯಂಕಾಲ ಶ್ರೀ ದೇವರಿಗೆ ಅಭಿಷೇಕ ಹಾಗೂ ರಥೋತ್ಸವ ಅತಿ ವಿಜೃಂಭಣೆಯಿಂದ ನಡೆಯುತ್ತದೆ ಹಾಗೂ ಮಳೆಗಾಲದ ಕೊನೆಯ ರಥೋತ್ಸವ ಅದಾಗಿರುತ್ತದೆ ಎಂದರು. ಇನ್ನೊಂದು‌ ವಿಚಾರವೆಂದರೆ ಪ್ರತಿ ವರ್ಷ ಈ ಕಾರ್ಯಕ್ರಮ ನಡೆಸುತ್ತಾ ಬಂದಿದ್ದೇವೆ ಎಂದರು. ಈ ವರ್ಷವೆಂದರೆ ದಿ. 26-04-2017 ರಂದು ಈ ತಿಥಿಯಲ್ಲಿ ನಡೆಯುವ ಕಾರ್ಯಕ್ಕೆ ನಿಮ್ಮ ಸಮಾಜದ ಉಪಸ್ಥಿತಿ ಇರಬೇಕು ಎಂದು ಶ್ರೀಗಳ ಅಪ್ಪಣೆ ಆಗಿದೆ, ಆದ್ದರಿಂದ ಪತ್ರದಲ್ಲಿ ಉಲ್ಲೇಖಿಸಿದವರ ಹೆಸರಿಗೆ ಈ ಬರುವ ದಿ. 26 ಫೇ ಯಂದು ಎಲ್ಲರೂ ಬಂದು ಶ್ರೀಗಳ ಭೇಟಿಯಾಗಬೇಕು ಎಂದು. ತಕ್ಷಣ ಕಾರ್ಯ ಪ್ರವೃತ್ತನಾಗಿ ಮೊದಲೆ ಅಖಿಲ ಕೋಮಾರಪಂಥ ಸಮಾಜದ ಅಧ್ಯಕ್ಷರಾದ ಶ್ರೀ ಆರ್. ಎಸ್. ನಾಯ್ಕ ಹಾಗೂ ಶ್ರೀ ಚಂದ್ರಕಾಂತ ರವರಲ್ಲಿ ಈ ವಿಚಾರವೂ ತಿಳಿಸಿದಾಗ ಆ ಪತ್ರದಲ್ಲಿ‌ ಉಲ್ಲೇಖಿಸಿದ ಹೆಸರಿನ ವ್ಯಕ್ತಿಗಳ ಹುಡುಕಾಟ ಪ್ರಾರಂಭಿಸಿದ ನಾವು ಸುಮಾರು ಜನರನ್ನು ಸಂಪರ್ಕಿಸಿ ಅವರ ಮನೆಯನ್ನು ಹುಡುಕಿ ಮಾರನೇ ದಿನವೇ ಶ್ರೀ ಕ್ಷೇತ್ರದಿಂದ ಒಬ್ಬ ಪ್ರತಿನೀಧಿಯನ್ನು ಪ್ರತಿ ಮನೆಗೆ ಕಳುಸಿಕೊಟ್ಟ ಆಡಳಿತ ಮಂಡಳಿಯು ದಿ. 26ಫೇ ದಂದು ನಡೆಯುವ ಧರ್ಮ ಸಭೆಗೆ ಬರುವಂತೆ ಅಪೇಕ್ಷಿಸಿದರು. ಅದರಂತೆ ಬಂದ ಕೆಲ ಕುಟುಂಬದವರು ಅದರಲ್ಲು ಮುಖ್ಯವಾಗಿ ಕಾಣಕೋಣ ಶ್ರೀ ಪೋಕ್ರು ಕೊಕ್ ನಾಯ್ಕ ಕುಟುಂಬದವರು ಶ್ರೀಗಳಿಗೆ ಫಲ ಸಮರ್ಪಣೆ ಮಾಡಿ ತಮ್ಮ ಮನವಿಯನ್ನು ಇಟ್ಟರು. ಆಗ ಶ್ರೀಗಳು ಹೇಳಿದ್ದು. ಇದೇ ಬರುವ ಚೈತ್ರ ಬಹುಳ ಅಮಾವಾಸ್ಯೆಯಿಂದ ನಿಮ್ಮ ನಿಂತು ಹೋದ ಕಾರ್ಯವನ್ನು ಪುನರಪಿ ಪ್ರಾರಂಭಿಸಿ. ಇನ್ನು ನೀವುಂಟು ಮಹಾಬಲೇಶ್ವರ ಉಂಟು . ಪರಂಪರೆಯು ಮುಂದೆವರಿಸಿಕೊಂಡಿ ಹೋಗಿ. ಅದಾಗಲೇ ನಮ್ಮ ಕಣ್ಣು ತುಂಬಿ ಬಂತು.

ಈ ಕಾರ್ಯಕ್ರಮವನ್ನು ರೂಪಿಸಿದ್ದು ಯಾವಾಗಾ ಗೋತ್ತೆ ಸನ್ 1935 ನವಂಬರ 17 ತಿಂಗಳಂದು ಆಗಿನ ಕ್ಷತ್ರಿಯ ಕೋಮಾರಪಂತ ಸಮಾಜದ ಮುಖ್ಯಸ್ಥರಾದ

1. ಶ್ರೀ ಅನಂತ ಮಾದಪ್ಪ ಕಳಸ.
2. ಶ್ರೀ ಕೃಷ್ಣ ಪಾಂಡುರಂಗ ಮೇತ್ರಿ. ಕೊಡಿಬಾಗ
3. ಶ್ರೀ ಯಾದವ ಈರಾ ನಾಯ್ಕ , ಅಂಕೋಲಾ
4. ಶ್ರೀ ಗುಣು ನಾರಾಯಣ ನಾಯ್ಕ, ಉಳಗಾ
5. ಶ್ರೀ ರಾಮಾ ನೂನಾ ನಾಯ್ಕ, ಕಾಜುಭಾಗ
6. ಶ್ರೀ ಮೇಘಾ ಘಾರು ನಾಯ್ಕ, ಅವರ್ಸಾ
7. ಶ್ರೀ ಪೋಕ್ರು ಕೊಕ್ ನಾಯ್ಕ, ಕಾಣಕೋಣ
8. ಶ್ರೀ ಮುಕುಂದ ಒಮು ಪಟದಾರ, ಬೇಲೆಕೇರಿ
9. ಶ್ರೀ ರಾಮಾ ತೂಕು ನಾಯ್ಕ, ಕಾಜುಭಾಗ
10. ಶ್ರೀ ಕೃಷ್ಣ ವೆಂಕಟೇಶ ಕಳಸ. ಕಡವಾಡ

ಇವರುಗಳು ಆ ಸಮಯದಲ್ಲೇ ನಮ್ಮ ಸಮಾಜದ ಹೆಸರನ್ನು ಉತ್ತುಂಗಕ್ಕೆ ಒಯ್ದ ಮಹಾನ್ ಕ್ಷತ್ರಿಯರು.
ವಿಚಾರ ಮಾಡಿ:
ನಮ್ಮ ಸಮಾಜ ಸನ್ 1935 ಇಸವಿ ಯಲ್ಲಿ ಶ್ರೀ ಕ್ಷೇತ್ರಕ್ಕೆ ಬೆಳ್ಳಿ ಕೊಡ (ಎಕೈಕ ಕೊಡ ಶ್ರೀ ಕ್ಷೇತ್ರದಲ್ಲಿ ಇವತ್ತೂ ಇದೆ) ಅರ್ಪಿಸಿದ್ದು. ರಥೋತ್ಸವಕ್ಕೆ ಬೇಕಿರುವ ಖರ್ಚುವೆಚ್ಚದ ಸಂಪೂರ್ಣ ತಯಾರಿ ಮಾಡಿ ಆ ದಿನವೇ ರೂ. 1215-00 ಅನ್ನು ಠೇವಣಿ ಇಟ್ಟು ಅದರ ಬಡ್ಡಿಯಲ್ಲಿ ಬಂದ ದುಡ್ಡಿನಲ್ಲಿ ರಥೋತ್ಸವ, ಗುರು ಕಾಣಿಕೆ ಹಾಗೂ ಇನ್ನಿತರೆ ಖರ್ಚುಗಳನ್ನು ಮುಂದಿನ ಪಿಳಿಗೆಗೆ ಮಿಸಲಿಟ್ಟಿದ್ದರು. ಸಮಾಜದ ಹೇಸರಲ್ಲಿ ಪೂಜೆಯನ್ನು ಗುರುತು ಮಾಡಿಟ್ಟಿದ್ದನ್ನು ನಾವೂ ಪುನಃ ಪ್ರಾರಂಭಿಸುವುದು ಬೇಡವೇ ? ಅವಕಾಶ ಸಿಕ್ಕಿದೆ, ಅದರ ಸಂಪೂರ್ಣ ಪ್ರಯೋಜನ ಪಡೆದು ಕೊಳ್ಳೋಣ. ಬನ್ನಿ ದಿನಾಂಕ 26-04-2017 ರಂದು ಸಹಸ್ರಾರು ಸಂಖ್ಯೆಯಲ್ಲಿ ಗೋಕರ್ಣಕ್ಕೆ ನಮ್ಮ ಕ್ಷತ್ರಿಯ ಪರಂಪರೆಯನ್ಮು ಮುಂದುವರಿಸಿ ಕೊಂಡು ಸಮಾಜವನ್ನು ಉತ್ತುಂಗಕ್ಕೆ ಏರಿಸೋಣ. ಮಹಾಬಲೇಶ್ವರನ ಕೃಪಾಕಟಾಕ್ಷವನ್ನು ಪಡೆಯೋಣ.

ಹರ‌ಹರ ಮಹಾದೇವ
ಇಂತಿ :
ನಿಮ್ಮ ರಾಮದಾಸ

ದಾಖಲೆಗಳು ಇರುವ ಸ್ಥಳ :
ಶ್ರೀ ಆರ್ . ಎಸ್ ನಾಯ್ಕ.
ಅಧ್ಯಕ್ಷರು ಅಖಿಲ ಕೋಮಾರಪಂತ ಸಮಾಜ
ಫೋ: 9448530676

ಹೆಚ್ಚಿನ ಮಾಹಿತಿಗಾಗಿ :
ಶ್ರೀ ಯೋಗೇಶ ಎಸ್. ನಾಯ್ಕ
ಫೋ:+918805999061
ಬೆಂಗಳೂರು
ರಾಮದಾಸ್ ಆರ್ ನಾಯ್ಕ
ಫೋ : 9481914495

ಈ ಕಾರ್ಯಕ್ಕೆ ಸಂಪೂರ್ಣ ಸಹಕರಿಸಿದ ಶ್ರೀ ಆರ್. ಎಸ್. ನಾಯ್ಕ., ಶ್ರೀ ಚಂದ್ರಕಾಂತ ನಾಯ್ಕ, ಶ್ರೀ ಶ್ರೀಕಾಂತ ವಿ. ನಾಯ್ಕ. ಶ್ರೀ ಯೋಗೇಶ ಎಸ್. ನಾಯ್ಕ , ಶ್ರೀ ಶ್ರೀಧರ ಮೇತ್ರಿ (ಗುರುಮನೆ), ಶ್ರೀ ಶ್ರೀನಿವಾಸ ಅ. ನಾಯ್ಕ ದಾಂಡೇಲಿ ಹಾಗೂ ಶ್ರೀ ಸೂರಜ್ ಕೊಮಾರಪಂಥ ಇವರಿಗೆ ಸದಾ ಕೃತಜ್ಞತೆಗಳು .WEBSITE VISITORS HITS