“ನವಚೇತನ ಕೋಮಾರಪಂತ ಸ್ವ ಸಹಾಯ ಸಂಘ”ದ ಅಡಿಯಲ್ಲಿ ಸಮಾಜದ ಮಕ್ಕಳಿಗಾಗಿಯೇ ಪ್ರತಿಷ್ಠಾನಗೊಂಡ “ಕೋಮಾರಪಂತ ಕಿಡ್ಸ್ ಇಂಟ್ರ್ಯಾಕ್ಟ್ ಕ್ಲಬ್” ನ ಎರಡನೇ ಕಾರ್ಯಕ್ರಮವಾಗಿ, “ಗಾಂಧೀಜಿಯವರ ಜನುಮದಿನ”ದಂದು ಸ್ಪರ್ಧೆಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಸಾಕಾರಗೊಂಡಿರುತ್ತದೆ. ನವಚೇತನದ ಉತ್ಸಾಹದಲ್ಲಿ ಆರಂಭವಾದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ, ಮಾಜಿ ಜೆಡಿಎಸ್ ನ ತಾಲುಕಾಧ್ಯಕ್ಷರು, ಕಾರ್ಮಿಕ ವರ್ಗದ ಮಾಜಿ ನಾಯಕರು, ಸಿಐಟಿಯು ನ ಸೆಂಟ್ರಲ್ ಮಾಜಿ ಅಧ್ಯಕ್ಷರು, ಡಬ್ಲ್ಯೂ ಸಿ ಪಿ ಎಮ್ ನ ಕಾರ್ಮಿಕರ ಮಾಜಿ ಅಧ್ಯಕ್ಷರಾದ ಶ್ರೀ ಉಮೇಶ ಪಿ. ನಾಯ್ಕ ರವರು ಮಾತನಾಡುತ್ತ.. ಸಮಾಜವನ್ನು ಕಟ್ಟಲು ಈ ಸಂಘಟನೆ ಅನುಸರಿಸುವ ಮಾರ್ಗವು ಶ್ಲಾಘನೀಯವಾಗಿದೆ. ಮಕ್ಕಳು ಸಮಾಜದ ಭವಿಷ್ಯ ಅವರಿಗಾಗಿ ಮಾಡುವ ಕಾರ್ಯಕ್ರಮಗಳು.. ನಿಜವಾದ ಸಮಾಜಿಕ ಕಳಕಳಿಯನ್ನು ತೋರಿಸುತ್ತದೆ. ನನಗೆ ದಾಂಡೇಲಿಯ ಈ ನವಚೇತನ ಸಂಘಟನೆಯ ಬಗ್ಗೆ ಹೆಮ್ಮೆ ಇದೆ. ಎಲ್ಲರೂ ಒಂದುಗೂಡಿ ಇನ್ನೂ ಬಲಿಷ್ಠವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಲಿ ಎಂದು ಹಾರೈಸಿದರು. ಅತಿಥಿ ಹಾಗೂ ನಿರ್ಣಾಯಕರಾಗಿ ಮಾತನಾಡಿದ ಶ್ರೀ ಪ್ರಮೋದ ನಾಯ್ಕ ರವರು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯು ಹೊರ ಹೊಮ್ಮಲು ಇಂತಹ ಕಾರ್ಯಕ್ರಮಗಳು ಉತ್ತೇಜನವಾಗುತ್ತವೆ. ಹೀಗೆಯೇ ಹೆಚ್ಚೆಚ್ಚು ಕಾರ್ಯಕ್ರಮಗಳು ನಡೆಯುತ್ತಿರಲಿ ಎಂದು ಹಾರೈಸಿದರು. ಅತಿಥಿ ಹಾಗೂ ನಿರ್ಣಾಯಕರಾಗಿ ಮಾತನಾಡಿದ ಕುಮಾರಿ ಶಿಲ್ಪಾ ಆರ್ ನಾಯ್ಕ ರವರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಕ್ಕೆ ತನ್ನನ್ನು ಆಮಂತ್ರಿಸದ್ದಕ್ಕೆ ತಾನು ಆಭಾರಿಯಾಗಿದ್ದೇನೆ ಎಂದು ನುಡಿದರು. ಅತಿಥಿ ಹಾಗೂ ನಿರ್ಣಾಯಕರಾಗಿ ಮಾತನಾಡಿದ ಶ್ರೀ ಗಣಪತಿ ನಾಯ್ಕ ರವರು ಮಾತನಾಡಿ ಆಧುನಿಕ ಯುಗದಲ್ಲಿ ಸಮಾಜ ಮುಖಿಯಾದ ಇಂತಹ ಕಾರ್ಯಕ್ರಮಗಳನ್ನು ನಮ್ಮ ಕೋಮಾರಪಂತ ಸಂಘಟನೆಯಲ್ಲಿ ಹಮ್ಮಿಕೊಂಡಿದ್ದಕ್ಕೆ ನಮಗೆ ಹೆಮ್ಮೆ ಎನಿಸುತ್ತದೆ, ಹಾಗೂ ಇಂತಹ ಅನೇಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶ್ರೀ ಪ್ರಶಾಂತ ಬಿ. ನಾಯ್ಕ ರವರು ಹಮ್ಮಿಕೊಂಡ ಕಾರ್ಯಕ್ರಮದ ಸಿದ್ದತೆಯ ಬಗ್ಗೆ ಮಾತನಾಡಿದರು. ನವಚೇತನ ಕೋಮಾರಪಂತ ಸಂಘಟನೆಯ ಪದಾಧಿಕಾರಿ ಸದಸ್ಯರಾದ ಶ್ರೀ ದಿಗಂಬರ ನಾಯ್ಕ ರವರು ಸ್ಪರ್ಧೆಯ ನಿಯಮವನ್ನು ವಿವರವಾಗಿ ತಿಳಿಸಿದರು. ಕೋಮಾರಪಂತ ಕಿಡ್ಸ್ ಇಂಟ್ರ್ಯಾಕ್ಟ್ ಕ್ಲಬ್ ನ ಕಾರ್ಯದರ್ಶಿಯಾದ ಅಜಯ ಎ. ನಾಯ್ಕ ರವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು. ಕೋಮಾರಪಂತ ಕಿಡ್ಸ್ ಇಂಟ್ರ್ಯಾಕ್ಟ್ ಕ್ಲಬ್ ನ ಸಹಕಾರ್ಯದರ್ಶಿಯಾದ ಕುಮಾರಿ ಶೃದ್ಧಾ ಜೆ. ನಾಯ್ಕ ರವರು ಗಣ್ಯರ ಪರಿಚಯವನ್ನು ಮಡಿಕೊಟ್ಟರು.
ಕೋಮಾರಪಂತ ಕಿಡ್ಸ್ ಇಂಟ್ರ್ಯಾಕ್ಟ್ ಕ್ಲಬ್ ನ ಉಪಾಧ್ಯಕ್ಷರಾದ ಅಂಕಿತಾ ಎಸ್. ನಾಯ್ಕ ರವರು ಅನಿಸಿಕೆಯನ್ನು ಹೇಳಿದರು. ಕೋಮಾರಪಂತ ಕಿಡ್ಸ್ ಇಂಟ್ರ್ಯಾಕ್ಟ್ ಕ್ಲಬ್ ನ ಖಜಾಂಚಿಯಾದ ಕುಮಾರ ಅಕ್ಷಯ ಡಿ. ನಾಯ್ಕ ರವರು ಕೊನೆಯಲ್ಲಿ ಎಲ್ಲರಿಗೂ ವಂದಿಸಿದರು. ಕೋಮಾರಪಂತ ಕಿಡ್ಸ್ ಇಂಟ್ರ್ಯಾಕ್ಟ್ ಕ್ಲಬ್ ನ ಅಧ್ಯಕ್ಷರಾದ ಕುಮಾರಿ ಪೂರ್ವಿ ವಿ. ನಾಯ್ಕರವರು ಕಾರ್ಯಕ್ರಮದ ನಿರೂಪಣೆಯನ್ನು ಸುಂದರವಾಗಿ ನಡೆಸಿಕೊಟ್ಟು ಚಪ್ಪಾಳೆಯ ಕಡತಾನವನ್ನು ಹೆಚ್ಚಿಸಿದರು. ಛಾಯಾಚಿತ್ರ ಸೇರೆ ಹಿಡಿಯುವ ವಿಭಾಗವನ್ನು ಶ್ರೀ ಚೇತನ ಜಿ. ನಾಯ್ಕ ಹಾಗೂ ಶ್ರೀ ಸಂಜಯ ಮಾಳಸೇಕರ ರವರು ಚೆನ್ನಾಗಿ ನಿಬಾಯಿಸಿದರು. ಶ್ರೀ ಉದಯ ಎಸ್. ನಾಯ್ಕ ರವರು ಸ್ಪರ್ಧೆಯ ಉಸ್ತುವಾರಿಯನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಶ್ರೀ ನಾಗೇಶ ಆರ್. ನಾಯ್ಕ, ಶ್ರೀ ಮಂಜುನಾಥ ಪಿ. ಕಳಸ, ಶ್ರೀ ರಾಘವೇಂದ್ರ ಎಲ್ಲ್. ನಾಯ್ಕ, ಶ್ರೀ ರಘುನಂದನ ಪಿ. ನಾಯ್ಕ, ಹಾಗೂ ಶ್ರೀ ಪ್ರಶೀಲ ಎನ್. ನಾಯ್ಕ ರವರು ಕಾರ್ಯಕ್ರಮ ಚೆಂದಗಾಣುವಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದರು. ಮಕ್ಕಳು ಸ್ಪರ್ಧೆಯಲ್ಲಿ ಅತ್ಯುತ್ಸಾಹದಲ್ಲಿ ಪಾಲ್ಗೊಂಡಿದ್ದರು. ಅವರನ್ನು ಪ್ರೋತ್ಸಾಹಿಸುವ ದೃಶ್ಯದಲ್ಲಿ ಪಾಲಕರು ಸಂಭ್ರಮಿಸುವುದು ವಿಶೇಷವಾಗಿತ್ತು. ನವಚೇತನ ಸಂಘದ ಸಂಸ್ಥಾಪಕನಾದ ನಾನು, ಪ್ರಶಾಂತ ಎಸ್. ನಾಯಕ ಮಾತನಾಡಿ, ಇಂತ ಕಾರ್ಯಕ್ರಮಗಳನ್ನು ಸಂಘಟನೆಯ ಸದಸ್ಯರು ಶ್ರಮ ವಹಿಸಿ ಮಾಡಿರುತ್ತಾರೆ, ಇದರ ಉಪಯೋಗವನ್ನು ಎಲ್ಲ ವರ್ಗದವರು ಮಾಡಿಕೊಳ್ಳಬೇಕು. ಹಾಗೂ ಸಮಾಜದ ಎಲ್ಲರೂ ಪಾಲ್ಗೊಳ್ಳಲು ಕರೆನೀಡಿದ್ದೇನೆ.
ನಿರ್ಣಾಯಕರು ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಬಾಯಿಸಿಕೊಟ್ಟರು ಅವರಿಗೆ ತುಂಬು ಹೃದಯದ ಧನ್ಯವಾದಗಳು. ಕಾರ್ಯಕ್ರಮದ ಯಶಸ್ವಿಗೆ ಶ್ರಮವಹಿಸಿದ ನಮ್ಮ ಸಂಘಟನೆಯ ಸದಸ್ಯರುಗಳಿಗೆ, ಪದಾಧಿಕಾರಿಗಳಿಗೆ ಧನ್ಯವಾದಗಳು, ಕಂಡು ಕಾಣದಂತೆ ನಮಗೆ ಸಹಾಯ ಹಸ್ತ ನೀಡಿದವರಿಗೂ ಧನ್ಯವಾದಗಳು.ಕೊನೆಯದಾಗಿ ಕ್ಷಮೆ ಕೇಳುತ್ತಾ… ನಮಗೆ, ಕೆಲಸದ ವತ್ತಡದಲ್ಲಿ ಮನೆ ಮನೆಗೆ ಹೋಗಿ ಕಾರ್ಯಕ್ರಮಕ್ಕೆ ಕರೆಯಲು ಆಗಿರುವುದಿಲ್ಲ, ಆದರೆ “ಮೋಬಾಯ್ಲ್ ಸಂದೇಶದ” ಮೂಲಕ ಎಲ್ಲರಿಗೂ ತಿಳಿಸಿರುತ್ತೇವೆ. ಕಾರಣಾಂತರದಿಂದ ಯಾರಿಗಾದರು ಸಂದೇಶ ತಲುಪದಿದ್ದರೆ “ಕ್ಷಮೆ ಇರಲಿ” ಎಂದು ಇನ್ನೊಮ್ಮೆ ವಿನಮ್ರನಾಗಿ ಕೇಳಿಕೊಳ್ಳುತ್ತೇನೆ. ಇದು ನಮ್ಮ ತೃತಿಯ ಕಾರ್ಯಕ್ರಮ, ಹೀಗೆಯೇ ಇನ್ನೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಕಾರ್ಯಕ್ರಮದ ಅಂಗವಾಗಿ ಅತಿಥಿ, ಮುಖ್ಯ ಅತಿಥಿ, ನಿರ್ಣಾಯಕರು ಹೀಗೆ ಹಲವಾರು ಗಣ್ಯರಿಗಾಗಿ ನಿಮ್ಮಲ್ಲಿಗೆ ಬರಲಿದ್ದೇವೆ. ತಾವು ದಯಮಾಡಿ ನಿರಾಕರಿಸದೇ ಸಹಕರಿಸಬೇಕು. ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ನಮ್ಮ ಕಾರ್ಯಕ್ರಮಕ್ಕೆ ಬಂದಂತ ಸಮಾಜದ ಗಣ್ಯ ಬಾಂಧವರಿಗೆ ನಾವು ಚಿರ ರುಣಿಯಾಗಿದ್ದೇವೆ.. ನೀವುಗಳು ಇಲ್ಲದೇ ಈ ಕಾರ್ಯಕ್ರಮ ಸಾಧ್ಯವಾಗುತ್ತಿರಲಿಲ್ಲ. ಕೋಮಾರಪಂತ ಸಮಾಜದ ಎಲ್ಲ ಗಣ್ಯ ಬಾಂಧವರಿಗೆ ನನ್ನ ಪರವಾಗಿ ನಮ್ಮ ಸಂಘಟನೆಯ ಪರವಾಗಿ ಧನ್ಯವಾದಗಳು. ನಿಮ್ಮ ಪ್ರೀತಿ ಸದಾ.. ಹೀಗೆಯೇ ನಮ್ಮಮೇಲಿರಲಿ. -ಪ್ರಶಾಂತ ಎಸ್. ನಾಯಕ 7676766698 9845066698 ನಿಮಗಾಗಿ, ಕಾರ್ಯಕ್ರಮದ ಕೆಲವು ಛಾಯಾಚಿತ್ರಗಳು. ಬರವಣಗೆಯಲ್ಲಿ ತಪ್ಪಾಗಿದ್ದರೆ ಕ್ಷಮಿಸಬೇಕು.