logo

Kshatriya Komarpanth Samaj

ಅಖಿಲ ಕೊಮಾರಪಂತ ಸಮಾಜ REG No. 332/83-84

logo  logo  logoNEWS:

Suggi 2017 (Kadwad)
ಕೋಮಾರಪಂಥ ಸಮಾಜ ಕಡವಾಡದವರು ಸುಮಾರು 47 ವರ್ಷದಿಂದ ನಿಂತು ಹೋದ ಸುಗ್ಗಿ ಪರಂಪರೆಯನ್ನು ಮತ್ತೆ ಪ್ರಾರಂಭಿಸಿದ ಅಪರೂಪದ ಘಟನೆ ಇಂದು ನಡೆದಿದೆ. ಶ್ರೀ ಮಾರುತಿ ನಾಯ್ಕ ರವರ ಮುಂದಾಳತ್ವದಲ್ಲಿ ನಡೆದ ಈ ಕಾರ್ಯಕ್ರಮವು ಸಮಾಜದ ಘಟಕಾಧಕ್ಷರಾದ ಶ್ರೀ ಮೋಹನ ನಾಯ್ಕ, ಶ್ರೀ ನಂದಾ ಕಳಸ ಶ್ರೀ ದಾಮೋದರ ನಾಯ್ಕ, ಶ್ರೀ ಸೋಯರು ನಾಯ್ಕ ಹಾಗೂ ಊರಿನ ಬುದವಂತರಾದ ಶ್ರೀ ದುಗಾ ನಾಯ್ಕ ಇವರ ಉಪಸ್ಥಿತಿಯಲ್ಲಿ ಹೊರಟ ಸುಗ್ಗಿ ಕೋಟೇಶ್ವರ ದೇವಸ್ಥಾನದಿಂದ ಶುರುವಾಗಿ ಮಹಾದೇವದೇವಸ್ಥಾನ, ಬುದವಂತರ ಮನೆ, ಹಾಗೂ ಇನ್ನಿತರೆ ಮನೆಯಲ್ಲಿ ಕೊಲಾಟ, ಹಾಗೂ ಜಾನಪದ ಹಾಡು, ನೃತ್ಯದ ಮೂಲಕ ಪ್ರದರ್ಶಿಸಲ್ಪಟ್ಟಿತು. ಈ ಸಂಧರ್ಭದಲ್ಲಿ ಅ.ಕೋ.ಸ. ಅಧ್ಯಕ್ಷ ರಾದ ಶ್ರೀ ಆರ್.ಎಸ್. ನಾಯ್ಕ. ಹಾಗೂ ಶ್ರೀ ಮಾಹಾದೇವ ನಾಯ್ಕ ಹಾಗೂ ಇನ್ನಿತರರು ಉಪಸ್ಥಿತಿರಿದ್ದರು. ಸುಗ್ಗಿ ಹಬ್ಬವು ರವಿವಾರ ಕೋಟೇಶ್ವರ ದೇವಸ್ಥಾನದಲ್ಲಿ ಸಂಪನ್ನಗೊಳ್ಳಲಿದೆ.WEBSITE VISITORS HITS