logo

Kshatriya Komarpanth Samaj

ಅಖಿಲ ಕೊಮಾರಪಂತ ಸಮಾಜ REG No. 332/83-84

logo  logo  logoNEWS:

ಜಾಲತಾಣ ಲೋಕಾರ್ಪಣ

ದಕ್ಷೀಣಾಮ್ನಾಯ ಪೀಠ ಶೃಂಗೇರಿ ಯ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಾಹಾಸ್ವಾಮಿ ಹಾಗೂ ಶ್ರೀ ಶ್ರೀ ವಿಧುಶೇಖರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ. ಅಖಿಲ ಕೊಮಾರಪಂತ ಸಮಾಜದ ಅಧ್ಯಕ್ಷರು ಹಾಗೂ ಸದಸ್ಯರು” ದಿನಾಂಕ 21 ರಂದು ದಕ್ಷೀಣಾಮ್ನಾಯ ಪೀಠ ಶೃಂಗೇರಿ ಯ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಾಹಾಸ್ವಾಮಿ ಹಾಗೂ ಶ್ರೀ ಶ್ರೀ ವಿಧುಶೇಖರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಸಮಾಜದ‌ ವತಿಯಿಂದ ಸಮಾಜದವರೇ ನಿರ್ಮಿಸಿದ ಜಾಲತಾಣ www.kshatriyakomarpanth.com ಅನ್ನು ಗುರುಗಳ ಅಪ್ಪಣೆಯ ಮೇರೆಗೆ ಲೋಕಾರ್ಪಣ ಮಾಡಲಾಯಿತು. ಇದೇ ಸಂದರ್ಭದಲ್ಲಿ ಶ್ರೀಗಳು ಸಮಸ್ತ ಕೊಮಾರಪಂತ ಬಂಧುಗಳ‌ ಏಳಿಗೆಗೆ ತಮ್ಮ ಮಾರ್ಗದರ್ಶನ ಹಾಗೂ ಬೆಂಬಲ ಪ್ರಕಟಿಸಿ, ಹಾರೈಸಿ, ಮುಂಬರುವ ದಿನಗಳಲ್ಲಿ ಚಾತುರ್ಮಾಸದ ಸಂದರ್ಭದಲ್ಲಿ ಸಮಾಜಕ್ಕೆ ಶಂಕರಾಚಾರ್ಯ ಪರಂಪರೆಯ ಪೀಠಕ್ಕೆ ಒಂದು ದಿನದ ಸೇವೆ ಸಲ್ಲಿಸಲು ಮಿಸಲಿಡುವುದರ ಬಗ್ಗೆ ಭರವಸೆಯನ್ನು ನೀಡಿ, ಆಶೀರ್ವದಿಸಿ ಸಮಾಜದ ಹಿಂದಿನ ಇತಿಹಾಸದ ಬಗ್ಗೆ ಉತ್ಖನನಕ್ಕೆ ಬೇಕಿರುವ ಅಷ್ಠಮಂಗಲ ಕಾರ್ಯದ ಬಗ್ಗೆಯೂ ತಮ್ಮ ಮತ ಸೂಚಿಸಿದರು. ಈ ಸಂದರ್ಭದಲ್ಲಿ ಸಮಾಜದ ಸಮಸ್ತ ಬಂಧುಗಳು ಒಂದಾಗಿ ಈ ವಿಚಾರವಾಗಿ ಪುನಃ ಶೃಂಗೇರಿ ಗೆ ಬರಬೇಕೆಂದು ಅಪ್ಪಣಿಸಿದರು. ಈ ಸೇವೆಯನ್ನು ಸರ್ವ ಕೊಮಾರಪಂತ ಸಮಾಜದವರು ಉದ್ಯೋಗ ಮಾಹಿತಿ, ವಧು-ವರ ಅನ್ವೇಷಣೆ ಹಾಗೂ ಜಗತ್ತಿನಾದ್ಯಂತ ನಡೆಯುವ ಸಮಾಜದ ಆಗು-ಹೊಗುವುದರ ವಿವರ ಹಾಗೂ ಮುಂದಿನ ದಿನಗಳಲ್ಲಿ ಇನ್ನು ಹತ್ತು ಹಲವು ಪ್ರಯೋಜನಕಾರಿ ವಿವರಗಳನ್ನು ಈ ಜಾಲತಾಣದಲ್ಲಿ ಲಭಿಸುವುದಾಗಿ ಈ ಸಂದರ್ಭದಲ್ಲಿ ಈ ಜಾಲತಾಣ ತಯಾರು ಮಾಡಿದ ದಾಂಡೇಲಿಯ ದಿ. ಅವಿನಾಶ್ ನಾಯ್ಕ ರವರ ಮಗ ರಾದ ಶ್ರೀನಿವಾಸ ರವರು ವಿವರಿಸಿದರು. ಈ ಕಾರ್ಯಕ್ರಮಕ್ಕೆ ಅಖಿಲ ಕೊಮಾರಪಂತ ಸಮಾಜದ ಅಧ್ಯಕ್ಷರಾದ ಶ್ರೀ ಆರ್.ಎಸ್.ನಾಯ್ಕ., ಶ್ರೀ ಪ್ರಕಾಶ ನಾಯ್ಕ, ಶ್ರೀ ಗಜೇಂದ್ರ ನಾಯ್ಕ, ಶ್ರೀ ಚಂದ್ರಕಾಂತ ನಾಯ್ಕ, ಶ್ರೀ ಯೊಗೇಶ ನಾಯ್ಕ, ಶ್ರೀ ಶ್ರೀನಿವಾಸ ಅವಿನಾಶ್ ನಾಯ್ಕ ಹಾಗೂ ಶ್ರೀ ರಾಮದಾಸ ನಾಯ್ಕ ಉಪಸ್ಥಿತರಿದ್ದಿ ಶ್ರೀಗಳ ಆಶೀರ್ವಚನದ ದಿವ್ಯ ಸಂದೇಶವನ್ನು ಆಸ್ವಾದಿಸಿದರು
WEBSITE VISITORS HITS